You are here

ಡಬ್ಲ್ಯುಆರ್‌ಐ ಇಂಡಿಯಾದ ಸಿಇಒ ಆಗಿ ಅಧಿಕಾರ ಸ್ವೀಕರಿಸಿದ ನಗರೀಕರಣ ಮತ್ತು ಸುಸ್ಥಿರ ಅಭಿವೃದ್ಧಿ ತಜ್ಞ ಮಾಧವ ಪೈ

ಡಬ್ಲ್ಯುಆರ್‌ಐ ಇಂಡಿಯಾದ ಸಿಇಒ ಆಗಿ ಅಧಿಕಾರ ಸ್ವೀಕರಿಸಿದ ನಗರೀಕರಣ ಮತ್ತು ಸುಸ್ಥಿರ ಅಭಿವೃದ್ಧಿ ತಜ್ಞ ಮಾಧವ ಪೈ

ಮುಂಬೈ 20ನೇ ಏಪ್ರಿಲ್‌ 2023: ನಗರಾಭಿವೃದ್ಧಿ ಮತ್ತು ಸಾರಿಗೆ ತಜ್ಞ ಮಾಧವ ಪೈ ಅವರನ್ನು ಡಬ್ಲ್ಯುಆರ್‌ಐ ಇಂಡಿಯಾದ (WRI India) ) ಹೊಸ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಆಗಿ ಘೋಷಿಸಲಾಗಿದೆ. ಮಾಧವ ಪೈ ಅವರು ತಮ್ಮ ಈ ಹೊಸ ಹುದ್ದೆಯಲ್ಲಿ, ಸಂಘಟನೆಯ ಕಾರ್ಯತಂತ್ರ, ಕಾರ್ಯಾಚರಣೆಗಳು ಮತ್ತು ಚಟುವಟಿಕೆಗಳನ್ನು ಮುನ್ನಡೆಸುವುದರ ಜೊತೆಗೆ ಮೇಲ್ವಿಚಾರಣೆಯನ್ನೂ ನಡೆಸಲಿದ್ದಾರೆ. ಪೈ ಅವರು ಕಳೆದ ಕೆಲವು ತಿಂಗಳುಗಳಿಂದ ‘ಡಬ್ಲ್ಯುಆರ್‌ಐ ಇಂಡಿಯಾ’ದ ತಾತ್ಕಾಲಿಕ ಸಿಇಒ ಆಗಿ ಸೇವೆ ಸಲ್ಲಿಸುತ್ತಿದ್ದರು.. ಸಂಸ್ಥೆಯ ಜೊತೆ 15 ವರ್ಷಗಳ ಒಡನಾಟ ಹೊಂದಿರುವ ಪೈ ಅವರು, ಸಂಸ್ಥೆಯ ಕಾರ್ಯತಂತ್ರ, ಸ್ವರೂಪ ಮತ್ತು ಬೆಳವಣಿಗೆ ಮುನ್ನಡೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅವರು ಹಿಂದಿನ ಸಿಇಒ ಮತ್ತು ಪ್ರಸ್ತುತ ಸಂಸ್ಥೆಯ ಹಿರಿಯ ಸಲಹೆಗಾರ ಡಾ. ಒಪಿ ಅಗರವಾಲ್ ಅವರ ಉತ್ತರಾಧಿಕಾರಿಯಾಗಿದ್ದಾರೆ. ಏಪ್ರಿಲ್ 22 ರಂದು ಆಚರಿಸಲಾಗುವ ‘ವಿಶ್ವ ಭೂ ದಿನ’ ಆಚರಣೆಯ ಸಂದರ್ಭದಲ್ಲಿಯೇ ಮಾಧವ ಪೈ ಅವರ ನೇಮಕದ ಆದೇಶ ಹೊರಡಿಸಲಾಗಿದೆ. ‘ಡಬ್ಲ್ಯುಆರ್‌ಐ ಇಂಡಿಯಾ‘ ಕಡಿಮೆ ಇಂಗಾಲದ ಆರ್ಥಿಕತೆಯ ಪರಿವರ್ತನೆಯಲ್ಲಿ ಭಾರತವನ್ನು ಉತ್ತೇಜಿಸಲು ದೇಶದ ನಗರಗಳು, ಆಹಾರ, ಭೂಮಿ, ನೀರು ಮತ್ತು ಇಂಧನ ವ್ಯವಸ್ಥೆಗಳನ್ನು ಪರಿವರ್ತಿಸುವ ಯೋಜನೆಗಳಲ್ಲಿ ಕಾರ್ಯನಿರ್ವಹಿಸುತ್ತಿದೆ.

ಸುಸ್ಥಿರ ನಗರಗಳ ಕಾರ್ಯಕ್ರಮದ ಕಾರ್ಯನಿರ್ವಾಹಕ ನಿರ್ದೇಶಕರಾಗಿದ್ದ ಪೈ ಅವರ ನಾಯಕತ್ವದಲ್ಲಿ, ಡಬ್ಲ್ಯುಆರ್‌ಐ ಇಂಡಿಯಾ, ನಗರ ಸಾರಿಗೆ, ನಗರಾಭಿವೃದ್ಧಿ ಮತ್ತು ವಿದ್ಯುತ್ ಬಳಕೆಗೆ ಸಂಬಂಧಿಸಿದ ರಾಷ್ಟ್ರೀಯ ಮತ್ತು ಉಪ-ರಾಷ್ಟ್ರೀಯ ನೀತಿಗಳನ್ನು ರೂಪಿಸಲು ಸಾಧ್ಯವಾಯಿತು. ಇವುಗಳಲ್ಲಿ ಮೋಟಾರು ವಾಹನ ತಿದ್ದುಪಡಿ ಕಾಯ್ದೆ, ರಾಷ್ಟ್ರೀಯ ವಿದ್ಯುತ್‌ಚಾಲಿತ ಬಸ್ ಕಾರ್ಯಕ್ರಮ ಮತ್ತು ಹಸಿರು ಜಲಜನಕ ಮಿಷನ್ ಸೇರಿವೆ. ಈ ಅವಧಿಯಲ್ಲಿ, ಪೈ ಅವರು ಬೆಂಗಳೂರು ಮಹಾನಗರ ಪಾಲಿಕೆ ಪುನರ್‌ರಚನೆ, ಮುಂಬೈ ಸ್ಟ್ರೀಟ್ ಲ್ಯಾಬ್, ಮುಂಬೈ ಹವಾಮಾನ ಕ್ರಿಯಾ ಯೋಜನೆ, ಸೂರತ್ ಶುದ್ಧ ಗಾಳಿ ಯೋಜನೆ ಮತ್ತು ನಗರ ಸಾರಿಗೆ ಬಸ್ ಸೌಲಭ್ಯಗಳಿಗೆ ತಂತ್ರಜ್ಞಾನ ಅಳವಡಿಕೆ ಕಾರ್ಯದಲ್ಲಿ ಸರ್ಕಾರಿ ಸಂಸ್ಥೆಗಳೊಂದಿಗೆ ಪಾಲುದಾರಿಕೆ ಬೆಂಬಲಿಸಲು ಹಾಗೂ ಈ ಎಲ್ಲ ಕಾರ್ಯಕ್ರಮಗಳನ್ನು ವಿಸ್ತರಿಸಲು ಸಹಾಯ ಮಾಡಿದ್ದಾರೆ. ಸಂಸ್ಥೆಯ ಸಿಇಒ ಆಗಿ ಪೈ ಅವರನ್ನು ಸ್ವಾಗತಿಸಿರುವ, ಇಂಡಿಯಾ ರಿಸೋರ್ಸಸ್ ಟ್ರಸ್ಟ್‌ನ ಮಂಡಳಿ ಅಧ್ಯಕ್ಷ ಜಮ್ಶಿಡ್‌ ಗೋದ್ರೇಜ್ ಅವರು, ‘ಮಾಧವ ಅವರು ಸುಸ್ಥಿರ ನಗರಗಳ ಕಾರ್ಯಕ್ರಮಗಳಿಗೆ ಶ್ರದ್ಧೆ, ಬದ್ಧತೆಯಿಂದ ಕಾರ್ಯನಿರ್ವಹಿಸಿರುವುದನ್ನೇ ತಮ್ಮ ನಾಯಕತ್ವದ ಸಂಸ್ಥೆಗೂ ಮುಂದುವರಿಸಲಿದ್ದಾರೆ ಎಂಬುದರ ಬಗ್ಗೆ ನನಗೆ ದೃಢ ವಿಶ್ವಾಸ ಇದೆ. ಅವರ ನಾಯಕತ್ವವು ಸದೃಢ, ಸಹಕಾರಿ ಮತ್ತು ಸಮರ್ಪಿತ ಪ್ರಯತ್ನಗಳು ಆಲೋಚನೆಗಳನ್ನು ಕಾರ್ಯರೂಪಕ್ಕೆ ತರಲು ಮತ್ತು ಭೂಮಿಯ ಹಾಗೂ ಭೂನಿವಾಸಿಗಳಿಗೆ ಬದಲಾವಣೆಯ ಪರಿಹಾರಗಳನ್ನು ರೂಪಿಸಲು ನೆರವಾಗಲಿದೆ. ಅವರು ತಮ್ಮ ವ್ಯವಸ್ಥೆ ವಿನ್ಯಾಸ ಜ್ಞಾನ, ನಾಯಕತ್ವದ ಸ್ಥಾನಗಳಲ್ಲಿನ ವರ್ಷಗಳ ಅನುಭವ ಮತ್ತು ಸಂಸ್ಥೆಯೊಂದಿಗಿನ ತಮ್ಮ ದೀರ್ಘಕಾಲದ ಒಡನಾಟವನ್ನು ಉತ್ತಮ ಪರಿಸರ ಮತ್ತು ಸಾಮಾಜಿಕವಾಗಿ ಸಮಾನ ಅಭಿವೃದ್ಧಿ ಉತ್ತೇಜಿಸಲು ಸಹಾಯ ಮಾಡಲು ನಾವು ಸಾಗುತ್ತಿರುವ ಹಾದಿಯಲ್ಲಿ ನಿರಂತರವಾಗಿ ಸುಧಾರಣೆ ಅಳವಡಿಕೆ ಮುಂದುವರಿಸುವುದನ್ನು ಖಚಿತಪಡಿಸಿಕೊಳ್ಳುವುದನ್ನು ನಾನು ಎದುರು ನೋಡುತ್ತಿದ್ದೇನೆ’ ಎಂದು ಹೇಳಿದ್ದಾರೆ.

"ಈ ಹಿಂದೆ ವರ್ಲ್ಡ್ ರಿಸೋರ್ಸಸ್ ಇನ್‌ಸ್ಟಿಟ್ಯೂಟ್‌ನಲ್ಲಿ ಎಂಬಾರ್ಕ್‌ (EMBARQ) ಕಾರ್ಯಕ್ರಮದ ನಿರ್ದೇಶಕರಾಗಿ, ಅವರು ಇಂದೋರ್ ಬಸ್ ರ‍್ಯಾಪಿಡ್‌ ಟ್ರಾನ್ಸಿಟ್ (ಬಿಆರ್‌ಟಿ), ರಾಹ್ಗಿರಿ (Raahgiri) ಮತ್ತು ಬಸ್‌ಕರೊ (BusKaro) ನಂತಹ ಹೆಗ್ಗುರುತು ಉಪಕ್ರಮಗಳಿಗೆ ಬೆಂಬಲ ನೀಡುವ ಜವಾಬ್ದಾರಿ ಹೊಂದಿದ್ದರು. ಅವರು ಖ್ಯಾತ ಲೇಖಕರಾಗಿರುವುದರ ಜೊತೆಗೆ ಪ್ರತಿಷ್ಠಿತ ನಿಯತಕಾಲಿಕಗಳಿಗೆ ಹಲವಾರು ಸಂಶೋಧನಾ ಪ್ರಬಂಧಗಳನ್ನು ಬರೆದಿದ್ದಾರೆ. ನಗರ ಸಾರಿಗೆ, ನಗರ ಯೋಜನೆ, ಸ್ವಾವಲಂಬನೆ ಮತ್ತು ಶುದ್ಧ ಗಾಳಿಯ ಕುರಿತು ಹಲವಾರು ಲೇಖನಗಳು ಮತ್ತು ಪುಸ್ತಕಗಳನ್ನು ಬರೆದಿದ್ದಾರೆ. ವನ್ಯಜೀವಿ ಉತ್ಸಾಹಿ ಮತ್ತು ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ನಂಬಿಕೆ ಹೊಂದಿರುವ ಅವರು, ತಮ್ಮ ಬಾಲ್ಯದಿಂದ ಕಂಡಿರುವ ಆಟದ ಮೈದಾನಗಳನ್ನು ನಾಶಗೊಳಿಸಿ ನಡೆಯುತ್ತಿರುವ ಅಭಿವೃದ್ಧಿ ಬಗ್ಗೆ ಚಿಂತಿತರಾಗಿರುವ ಅವರು ಪರಿಸರ ಸಂರಕ್ಷಣೆ ಬಗ್ಗೆ ಹೆಚ್ಚಿನ ಕಾಳಜಿ ಹೊಂದಿದ್ದಾರೆ.

ಸಂಸ್ಥೆಯ ಆಡಳಿತವನ್ನು ತಮ್ಮ ಸುಪರ್ದಿಗೆ ಪಡೆದುಕೊಂಡಿರುವ ಪೈ ಅವರು ಪ್ರತಿಕ್ರಿಯಿಸಿ, ‘ಹವಾಮಾನ ಬದಲಾವಣೆಯ ಕೆಟ್ಟ ಪರಿಣಾಮಗಳನ್ನು ತಪ್ಪಿಸಲು ತುರ್ತು ಕ್ರಮಗಳನ್ನು ತೆಗೆದುಕೊಳ್ಳುವಂತೆ ಇತ್ತೀಚಿನ ‘ಐಪಿಸಿಸಿ’ ವರದಿಯು ನಮ್ಮನ್ನು ಒತ್ತಾಯಿಸುತ್ತದೆ. ಇದು 2070 ರ ವೇಳೆಗೆ ನಿವ್ವಳ ಶೂನ್ಯ ಸಾಧಿಸುವ ಭಾರತದ ಬದ್ಧತೆಯನ್ನು ಬೆಂಬಲಿಸುವುದು ಅತ್ಯಂತ ಪ್ರಮುಖವಾಗಿದೆ. ಇದು ಇಂಧನ ವ್ಯವಸ್ಥೆ, ಆಹಾರ ವ್ಯವಸ್ಥೆ ಮತ್ತು ನಗರೀಕರಣಕ್ಕೆ ನಾವು ಸದ್ಯಕ್ಕೆ ಅನುಸರಿಸುತ್ತಿರುವ ನಿಲುವು ಹಾಗೂ ಧೋರಣೆಯನ್ನು ಪರಿವರ್ತಿಸುವ ಅಗತ್ಯ ಇರುವುದನ್ನು ಪ್ರತಿಪಾದಿಸುತ್ತದೆ. ‘ಡಬ್ಲ್ಯುಆರ್‌ಐ ಇಂಡಿಯಾ‘ದಲ್ಲಿ ನಾವು ಉನ್ನತ ಗುಣಮಟ್ಟದ ಪುರಾವೆಗಳು ಮತ್ತು ಸಂಶೋಧನೆಗಳನ್ನು ತರುವ ಮೂಲಕ ಮತ್ತು ಖಾಸಗಿ ವಲಯ, ನಮ್ಮಂತಹ ಇತರ ಸಂಸ್ಥೆಗಳು ಮತ್ತು ಸಮುದಾಯ ಸಂಘಟನೆಗಳ ಸಹಭಾಗಿತ್ವದಲ್ಲಿ ಕಾರ್ಯನಿರ್ವಹಿಸುವ ಮೂಲಕ ಈ ವ್ಯವಸ್ಥೆಯ ಪರಿವರ್ತನೆಗಳಿಗೆ ವೇಗ ನೀಡಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಬೆಂಬಲಿಸಲು ಬದ್ಧರಾಗಿದ್ದೇವೆ’ ಎಂದು ಹೇಳಿದ್ದಾರೆ.

ಪೈ ಅವರು ಮುಂಬೈ ವಿಶ್ವವಿದ್ಯಾನಿಲಯದಿಂದ ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿದ್ದು, ಬರ್ಕ್ಲಿಯ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಿಂದ ಸಾರಿಗೆ ಯೋಜನೆಯಲ್ಲಿ ಸ್ನಾತಕೋತ್ತರ ಪದವಿ ಹೊಂದಿದ್ದಾರೆ. ಅವರು 2023ರ ಏಪ್ರಿಲ್ 19ರಂದು ಡಬ್ಲ್ಯುಆರ್‌ಐ ಇಂಡಿಯಾದ ಸಿಇಒ ಆಗಿ ಅಧಿಕಾರವಹಿಸಿಕೊಂಡಿದ್ದಾರೆ. ಸದ್ಯಕ್ಕೆ ಅವರು ಮುಂಬೈನಲ್ಲಿ ನೆಲೆಸಿದ್ದಾರೆ.


Media contacts:

Nitya Kaushik, WRI India: 9819902763, nitya.kaushik@wri.org


Read the English press release here.

Read the Hindi press release here.

Read the Marathi press release here.


About WRI India WRI India, an independent charity legally registered as the India Resources Trust, provides objective information and practical proposals to foster environmentally sound and socially equitable development. Our work focuses on building sustainable and liveable cities and working towards a low carbon economy. Through research, analysis, and recommendations, WRI India puts ideas into action to build transformative solutions to protect the earth, promote livelihoods, and enhance human well-being. We are inspired by and associated with World Resources Institute (WRI), a global research organization with more than 400 experts and other staff around the world.

Stay Connected

Sign up for our newsletters

WRI India's monthly newsletter 'Stories that Matter' is delivered directly into your LinkedIn feed. Stay updated on insightful articles, news, research and more.